ನಿಮ್ಮ Android ಫೋನ್ ಬಳಸುವ ಮೂಲಕ, ಲೈವ್ ಟ್ರಾನ್ಸ್ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್ಗಳು ಕಿವುಡರು ಮತ್ತು ಕೇಳಲು ಕಷ್ಟವಿರುವ ಜನರಿಗೆ ದೈನಂದಿನ ಸಂಭಾಷಣೆಗಳನ್ನು ಹಾಗೂ ಸುತ್ತಮುತ್ತಲಿನ ಶಬ್ದಗಳನ್ನು ಇನ್ನಷ್ಟು ಸುಲಭವಾಗಿ ಗ್ರಹಿಸಲು ನೆರವಾಗುತ್ತವೆ.
ಹೆಚ್ಚಿನ ಸಾಧನಗಳಲ್ಲಿ, ನೀವು ಈ ಕೆಳಗಿನ ಹಂತಗಳ ಮೂಲಕ ಲೈವ್ ಟ್ರಾನ್ಸ್ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್ಗಳನ್ನು ತೆರೆಯಬಹುದು:
1. ನಿಮ್ಮ ಸಾಧನದ ಸೆಟ್ಟಿಂಗ್ಗಳ ಆ್ಯಪ್ ತೆರೆಯಿರಿ
2. ಆ್ಯಕ್ಸೆಸಿಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ
3. ನೀವು ಯಾವ ಫೀಚರ್ ಬಳಸಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ, ಲೈವ್ ಟ್ರಾನ್ಸ್ಕ್ರೈಬ್ ಅಥವಾ ಸೌಂಡ್ ನೋಟಿಫಿಕೇಶನ್ಗಳನ್ನು ಟ್ಯಾಪ್ ಮಾಡಿ
ಲೈವ್ ಟ್ರಾನ್ಸ್ಕ್ರೈಬ್ ಅಥವಾ ಸೌಂಡ್ ನೋಟಿಫಿಕೇಶನ್ಗಳನ್ನು ಪ್ರಾರಂಭಿಸಲು ನೀವು ಆ್ಯಕ್ಸೆಸಿಬಿಲಿಟಿ ಬಟನ್, ಜೆಸ್ಚರ್ ಅಥವಾ ತ್ವರಿತ ಸೆಟ್ಟಿಂಗ್ಗಳನ್ನು ಸಹ ಬಳಸಬಹುದು (
https://g.co/a11y/shortcutsFAQ).
ನೈಜ-ಸಮಯದ ಟ್ರಾನ್ಸ್ಕ್ರಿಪ್ಶನ್ಗಳು• ಮರುವಿನ್ಯಾಸಗೊಳಿಸಲಾದ ಸಂಭಾಷಣೆ ಇಂಟರ್ಫೇಸ್, ಪರಸ್ಪರರ ನಡುವೆ ಸುಗಮವಾಗಿ ಮತ್ತು ಸುಲಭವಾಗಿ ಸಂವಹನ ನಡೆಸಲು ನೆರವಾಗುತ್ತದೆ.
• 80ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳಲ್ಲಿ ನೈಜ ಸಮಯದಲ್ಲಿ ಟ್ರಾನ್ಸ್ಕ್ರಿಪ್ಶನ್ಗಳನ್ನು ಪಡೆಯಿರಿ. ಹೆಸರುಗಳು ಅಥವಾ ಮನೆಯಲ್ಲಿ ಬಳಸುವ ವಸ್ತುಗಳಂತಹ ನೀವು ಪದೇ ಪದೇ ಬಳಸುವ ಕಸ್ಟಮ್ ಪದಗಳನ್ನು ಸೇರಿಸಿ.
• ಯಾರಾದರೂ ನಿಮ್ಮ ಹೆಸರನ್ನು ಕರೆದಾಗ ನಿಮ್ಮ ಫೋನ್ ವೈಬ್ರೇಟ್ ಆಗುವಂತೆ ಸೆಟ್ ಮಾಡಿ.
• ನಿಮ್ಮ ಮಾತುಕತೆಯಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಿ.
• ಉತ್ತಮ ಆಡಿಯೋ ಗ್ರಹಿಕೆಗಾಗಿ ವೈಯರ್ಡ್ ಹೆಡ್ಸೆಟ್ಗಳು, ಬ್ಲೂಟೂತ್ ಹೆಡ್ಸೆಟ್ಗಳು ಮತ್ತು USB ಮೈಕ್ಗಳಲ್ಲಿರುವ ಬಾಹ್ಯ ಮೈಕ್ರೊಫೋನ್ಗಳನ್ನು ಬಳಸಿ.
• ಫೋಲ್ಡ್ ಮಾಡಬಹುದಾದ ಫೋನ್ಗಳಲ್ಲಿ, ಇತರರೊಂದಿಗೆ ಸುಲಭವಾಗಿ ಸಂವಹನ ನಡೆಸಲು ಹೊರಗಿನ ಸ್ಕ್ರೀನ್ನಲ್ಲಿ ಟ್ರಾನ್ಸ್ಕ್ರಿಪ್ಶನ್ಗಳು ಮತ್ತು ಟೈಪ್ ಮಾಡಿದ ಪ್ರತಿಕ್ರಿಯೆಗಳನ್ನು ತೋರಿಸಿ.
• ಟ್ರಾನ್ಸ್ಕ್ರಿಪ್ಶನ್ಗಳನ್ನು 3 ದಿನಗಳವರೆಗೆ ಸೇವ್ ಮಾಡಲು ಆಯ್ಕೆಮಾಡಿ. ಸೇವ್ ಮಾಡಲಾದ ಟ್ರಾನ್ಸ್ಕ್ರಿಪ್ಶನ್ಗಳು ನಿಮ್ಮ ಸಾಧನದಲ್ಲಿ 3 ದಿನಗಳವರೆಗೆ ಉಳಿಯುತ್ತವೆ, ಇದರಿಂದ ಅವುಗಳನ್ನು ನೀವು ಎಲ್ಲಿಗೆ ಬೇಕಾದರೂ ಕಾಪಿ ಮಾಡಿ, ಪೇಸ್ಟ್ ಮಾಡಬಹುದು. ಡೀಫಾಲ್ಟ್ ಆಗಿ, ಟ್ರಾನ್ಸ್ಕ್ರಿಪ್ಶನ್ಗಳನ್ನು ಸೇವ್ ಮಾಡಲಾಗುವುದಿಲ್ಲ.
ಸೌಂಡ್ ನೋಟಿಫಿಕೇಶನ್ಗಳು• ಸ್ಮೋಕ್ ಅಲಾರಾಂ ಬೀಪ್ ಮಾಡಿದಾಗ ಅಥವಾ ಮಗು ಅಳುವಂತಹ ನಿಮ್ಮ ಸುತ್ತಮುತ್ತಲಿನ ಪ್ರಮುಖ ಧ್ವನಿಗಳ ಕುರಿತು ಸೂಚನೆ ಪಡೆಯಿರಿ.
• ನಿಮ್ಮ ಉಪಕರಣಗಳು ಬೀಪ್ ಮಾಡಿದಾಗ ಸೂಚನೆ ಪಡೆಯಲು ಕಸ್ಟಮ್ ಧ್ವನಿಗಳನ್ನು ಸೇರಿಸಿ.
• ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಕಳೆದ 12 ಗಂಟೆಗಳ ಧ್ವನಿಗಳನ್ನು ಪರಿಶೀಲಿಸಿ.
ಅವಶ್ಯಕತೆಗಳು:• Android 12 ಮತ್ತು ಅದಕ್ಕಿಂತ ಮೇಲಿನ ಆವೃತ್ತಿ
ಲೈವ್ ಟ್ರಾನ್ಸ್ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್ಗಳನ್ನು ಗ್ಯಾಲೌಡೆಟ್ ವಿಶ್ವವಿದ್ಯಾಲಯ ಮತ್ತು ರೋಚೆಸ್ಟರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯಾಷನಲ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಫಾರ್ ದಿ ಡೆಫ್ (RIT/NTID) ಸಹಯೋಗದೊಂದಿಗೆ ಮಾಡಲಾಗಿದೆ.
ಸಹಾಯ ಮತ್ತು ಫೀಡ್ಬ್ಯಾಕ್• ಫೀಡ್ಬ್ಯಾಕ್ ನೀಡಲು ಮತ್ತು ಉತ್ಪನ್ನ ಅಪ್ಡೇಟ್ಗಳನ್ನು ಪಡೆಯಲು,
https://g.co/a11y/forum ನಲ್ಲಿ ಆ್ಯಕ್ಸೆಸ್ ಮಾಡಬಹುದಾದ Google Group ಗೆ ಸೇರಿಕೊಳ್ಳಿ
• ಲೈವ್ ಟ್ರಾನ್ಸ್ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್ಗಳನ್ನು ಬಳಸಿಕೊಂಡು ಸಹಾಯಕ್ಕಾಗಿ,
https://g.co/disabilitysupport ನಲ್ಲಿ ನಮ್ಮೊಂದಿಗೆ ಸಂಪರ್ಕ ಸಾಧಿಸಿ
ಅನುಮತಿಗಳ ಸೂಚನೆಮೈಕ್ರೊಫೋನ್: ನಿಮ್ಮ ಸುತ್ತಲಿನ ಮಾತು ಮತ್ತು ಧ್ವನಿಗಳನ್ನು ಟ್ರಾನ್ಸ್ಕ್ರೈಬ್ ಮಾಡಲು ಲೈವ್ ಟ್ರಾನ್ಸ್ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್ಗಳಿಗೆ ಮೈಕ್ರೊಫೋನ್ ಆ್ಯಕ್ಸೆಸ್ನ ಅಗತ್ಯವಿದೆ. ಟ್ರಾನ್ಸ್ಕ್ರಿಪ್ಶನ್ಗಳು ಅಥವಾ ಗುರುತಿಸಲಾದ ಶಬ್ದಗಳನ್ನು ಪ್ರಕ್ರಿಯೆಗೊಳಿಸಿದ ನಂತರ ಆಡಿಯೊವನ್ನು ಸಂಗ್ರಹಿಸಲಾಗುವುದಿಲ್ಲ.
ನೋಟಿಫಿಕೇಶನ್ಗಳು: ಶಬ್ದಗಳ ಕುರಿತು ನಿಮಗೆ ತಿಳಿಸಲು ಸೌಂಡ್ ನೋಟಿಫಿಕೇಶನ್ಗಳ ಫೀಚರ್ಗಳಿಗೆ ನೋಟಿಫಿಕೇಶನ್ಗಳ ಆ್ಯಕ್ಸೆಸ್ ಅಗತ್ಯವಿರುತ್ತದೆ.
ಸಮೀಪದಲ್ಲಿರುವ ಸಾಧನಗಳು: ನಿಮ್ಮ ಬ್ಲೂಟೂತ್ ಮೈಕ್ರೊಫೋನ್ಗಳೊಂದಿಗೆ ಕನೆಕ್ಟ್ ಮಾಡಲು ಲೈವ್ ಟ್ರಾನ್ಸ್ಕ್ರೈಬ್ಗೆ ಸಮೀಪದಲ್ಲಿರುವ ಸಾಧನಗಳ ಆ್ಯಕ್ಸೆಸ್ ಅಗತ್ಯವಿರುತ್ತದೆ.
ಆ್ಯಕ್ಸೆಸಿಬಿಲಿಟಿ ಸೇವೆ: ಸೌಂಡ್ ನೋಟಿಫಿಕೇಶನ್ಗಳು ಹಿನ್ನೆಲೆಯಲ್ಲಿ ಶಬ್ದ ಪತ್ತೆಹಚ್ಚುವ ಸೇವೆಯನ್ನು ನಡೆಸಲು ಮತ್ತು ನಿಮ್ಮ ಸಾಧನದ ಆ್ಯಕ್ಸೆಸಿಬಿಲಿಟಿ ಬಟನ್ ಅಥವಾ ಜೆಸ್ಚರ್ ಮೂಲಕ ತ್ವರಿತವಾಗಿ ಬಳಸಲು ಆ್ಯಕ್ಸೆಸಿಬಿಲಿಟಿ ಸೇವೆ API ಅನ್ನು ಬಳಸುತ್ತದೆ. ಸ್ಕ್ರೀನ್ ಕಂಟೆಂಟ್ ಅಥವಾ ವೈಯಕ್ತಿಕ ಮಾಹಿತಿಯನ್ನು ಓದಲು, ಸಂಗ್ರಹಿಸಲು ಅಥವಾ ಉಳಿಸಿಕೊಳ್ಳಲು ಈ API ಅನ್ನು ಬಳಸಲಾಗುವುದಿಲ್ಲ.